ಹಂಗು ಹಿಂಗು engineering ಮುಗಸಿ ....
ಕಷ್ಟ ಪಟ್ಟು ಕೆಲಸ ಹಿಡದು ....
ಮೋಟೊರ್ ಬೈಕ್ ನಡಸಿ ಸೊಂಟ ಮುರ್ಕೊಂಡ್ ....
volvo ಬಸ್ಸಲಿ ಗಡ ಗಡ ನಡುಗೋ ಲೈಫು ಇಷ್ಟೇನೆ ...
ಹಿಂದಿನ ರಿಲೀಸ್ ನ ಬಗ್ ಲೀಕ್ಸ್ ಚೆಕ್ ಮಾಡು ...
ಮುಂದಿನ ರಿಲೀಸ್ ಗೆ ಟೆಸ್ಟ್ ಕೇಸ್ ಹಾಕು ...
ಇಂದಿನ ರಿಲೀಸ್ ಹಾಳಾಗ್ ಹೋಗ್ಲಿ ...
ಲೈಫು ಇಷ್ಟೇನೆ ..
kannada Blog
My experiments with kannada literature. I want Internet to be filled with Kannada literature. This is the initiative
Tuesday, October 19, 2010
Saturday, May 1, 2010
ರಬ್ ನೆ ಬನಾದಿ ಜೋಡಿ....
ರಬ ನೆ ಬನಾದಿ ಜೋಡಿ ನೋಡಿದೆ. ಒಳ್ಳೆ ಸಿನೆಮ ಇದನ್ನ ಟಾಕಿಸ್ ನಲ್ಲಿ ಯಾಕಾದರೂ ನೋಡಲಿಲ್ಲ ಅನಿಸ್ತು. ಚಿತ್ರವನ್ನ ಅದರ hype period ನ ನಂತರ ನೋಡೋ ಮಜಾನೆ ಬೇರೆ. ಅಲ್ಲಿ ಯಾರದೂ review ನ ದೃಷ್ಟಿ ಇರೋದಿಲ್ಲ ಬರಿ ಮನೋರಂಜನೆಯೇ ಉದ್ದೇಶ ಆಗಿರ್ತದೆ. ಇರಲಿ ಕಥೆ ಇಷ್ಟೇ... ಮಾಸ್ತರ್ ಮಗಳ ಮದುವೆಗೆ ಹೋಗಿ ಅನಿವಾರ್ಯ ಕಾರಣದಿಂದ ಅವಳನ್ನೇ ಮದುವೆ ಮಾಡಿಕೊಂಡು ಅವಳೊಂದಿಗೆ ಸಂಸಾರ ಮಾಡೋ ಸಾಮಾನ್ಯ ಮನುಷ್ಯನ ಕಥೆ. ಚೆನ್ನಾಗಿ ಬರೆದಿದ್ದರೆ ಚಿತ್ರಕಥೆಯನ್ನ. ಚಿತ್ರಕಥೆ ಚೆನ್ನಾಗಿದ್ದರೆ ಸಣ್ಣ ಪುಟ್ಟ ನಿರ್ದೇಶನದ ತಪ್ಪುಗಳನ್ನ ಹೊಂದಿಸಿಕೊಂಡು ಹೋಗಬಹುದು.
ಶಾಹರುಖ್ ಖಾನ್ ನನ್ನ ಅತ್ಯಂತ ಮೆಚ್ಚಿನ ನಟನೆನು ಅಲ್ಲ, ಆದ್ರೆ ಆತ ಸಾಮಾನ್ಯ ಮನುಷ್ಯನಾಗಿ ಅಭಿನಯಿಸಿದ ಎಲ್ಲ ಚಿತ್ರಗಳು ನನಗೆ ಹಿಡಿಸಿವೆ. ಅದು ದಿಲ್ ಸೆ, ಕಭಿ ಹಾ ಕಭಿ ನಾ ಅಥವಾ ರಾಜು ಬನ್ ಗಯಾ ಜಂಟಲ್ ಮ್ಯಾನ್ ಆಗಿರಬಹುದು. ಪೂರ್ತಿ ರಿವಿವ್ ಬರೆಯೋ ಉದ್ದೇಶ ಏನು ಇಲ್ಲ. ಆದರು ಒಂದು ವಿಷಯ ಹೇಳ್ಬೇಕು. ಕಥೆ ಹೇಳ್ತಾ ಹೇಳ್ತಾ ಒಬ್ಬ ಆದರ್ಶ ಗಂಡನಿಂದ ಒಬ್ಬ ಅನುಮಾನಿ ಗಂಡನಾಗಿ ಸ್ವಲ್ಪ ತೋರಿಸಿದ್ದಾನೆ ನಿರ್ದೇಶಕ. ಹೆಂಡತಿ ತನ್ನ ಇನ್ನೊಂದು ವೇಷದೊಂದಿಗೆ ಓಡಿ ಹೋಗುತ್ತಾಳೋ ಏನೋ ನೋಡೋಣ ಅಂತ ಮಾಡೋ ಪ್ರಯತ್ನ faminists ಗೆ ಸ್ವಲ್ಪ ಸಿಟ್ಟು ತರಿಸಬಹುದು. ನಾನು ಹೇಗಿದ್ದಿನೋ ಹಾಗೆ ಒಪ್ಪಿಕೊಳ್ಳಲಿ ಅವಳು ಅಂತ ಅನ್ನುವ ಮಾತು ಸ್ವಲ್ಪ ಸಾಮಾನ್ಯ ಭಾರತೀಯ ಗಂಡಸಿನಂತಿದೆ. ಆದ್ರೆ ಅವಳು ಬದಲಾಗೋದು ಅವನಿಗೆ ಇಷ್ಟ ಇರೋದಿಲ್ಲ! ಇದನ್ನ ಚೆನ್ನಾಗಿ manage ಮಾಡಿದ್ದರೆ ನಿರ್ದೇಶಕರು. ಭಾರತ ಪುರುಷ ಪ್ರಧಾನ ದೇಶ ಆಗಿತ್ತು, ಹಾಗಂತ ಈಗ ಹೇಳೋಕಾಗಲ್ಲ.. ಹಾಗಂತ ಮಹಿಳೆಯರನ್ನ ಮೆಚ್ಚಿಸಲಿಕ್ಕೆ ಹೋದ್ರೆ ಸಿನೆಮ ಸೋಲೋ ಸಾಧ್ಯತೆ ಇರ್ತದೆ. ಎರಡನ್ನು ಚೆನ್ನಾಗಿ ಹೊಂದಿಸಿಕೊಂಡು ಹೋಗಿದ್ದಾರೆ ನಿರ್ದೇಶಕರು. ಒಟ್ಟಿನಲ್ಲಿ ಒಂದು ಒಳ್ಳೆ ಚಿತ್ರ ನೀಡಿದ್ದಾರೆ ದರ್ಶಕಾರಿಗೆ.

Sunday, April 25, 2010
ಭಾನುವಾರದ ಮಳೆ

ಭಾನುವಾರ ಮಧ್ಯಾಣ ಹೊತ್ತು ಕಳೆಯೋದು ಕಷ್ಟ ಅನಸ್ಲಿಕತಿತ್ತು. "ಮಳೆ ಬರಲಿ ಮಂಜೂ ಇರಲಿ" ಆಯ್ತು "ಚಶ್ಮೆ ಬದ್ದೂರ್" ಕೂಡಾ ಮುಗೀತು. ಹೀಗೆ ಎರಡು ಸಿನೆಮ ನೋಡಿದ್ರೂ ಟೈಂ ಹೋಗ್ತಾ ಇಲ್ಲ. ಏನು ಮಾಡಬೇಕೋ ತೋಚದೆ ಸುಮ್ನೆ ಕೂತಾಗ ಶುರು ಆಯ್ತು ಜೋರಾದ ಗಾಳಿ. ಎಂದೂ ಹತ್ತದ ಮಾಳಿಗೆ ಹತ್ತಿ ಗಾಳಿಯ ಮಜ ತೊಗೊಳ್ತಾ ಇದ್ದಾಗ ತೆಗೆದ ಚಿತ್ರಗಳು. ಕ್ಯಾಮೆರಾ ಇರಲಿಲ್ಲ ಮೊನ್ನೆ ತಾನೇ ತೊಗೊಂಡ ಇ೬೩ ಇಂದ ತೆಗೆದೇ ಚಿತ್ರಗಳನ್ನ. ಮೋಡದ ಒಳಗಿಂದ ಬರ್ತಿದ್ದ ಸೂರ್ಯ ಕಿರಣಗಳು ನೋಡ್ಲಿಕ್ಕೆ ಬಲು ಚೆಂದ.
javascript:void(0)
ಮಳೆ ನೋಡುತ್ತಾ ಹೀರಿದ ಕಾಫಿ ಲೋಟ ತೊಳೆದದ್ದು ಹೀಗೆ. :-)
Saturday, April 10, 2010
Bangalore ಸೆಕೆ
ಗುಲ್ಬರ್ಗ ದಿಂದ ಬಂದ ನಮಗೆ ಸೆಕೆ ಏನು ಹೊಸದಲ್ಲ. ಆದ್ರೆ ಈ ಸಲದ ಬೇಸಿಗೆ ನಮಗೆ ಮತ್ತೆ ಗುಲ್ಬರ್ಗಾ ದ ನೆನಪು ತರಿಸುತ್ತಿದೆ. ನಾವು ಬೆಂಗಳೂರಿಗೆ ಬಂದಾಗ ಹೀಗಿರಲಿಲ್ಲ. ಚಳಿಗಾಲದಲ್ಲಿ ಚಳಿ ಮಳೆಗಾಲದಲ್ಲಿ ಮಳಿ ಬರ್ತಾ ಇತ್ತು. ಈ ವರ್ಷದ ಹವಾಮಾನ ಏರುಪೇರು ನೋಡಿದ್ರೆ ನಿಜಕ್ಕೂ ಚಿಂತೆ ಆಗ್ತದೆ.
Monday, December 4, 2006
ಇತಿ-ಹಾಸ
ಇವತ್ತು ಎಸ್.ಎಲ್.ಭೈರಪ್ಪ ಅವರ ಲೇಖನ ಓದಿ ನಿಜವಾಗಿಯೂ ವಿಚಿತ್ರ ಅನ್ನಿಸಿತು.ನಮಗೆ ನಮ್ಮ ಇತಿಹಾಸವೇ ಗೊತ್ತಿಲ್ಲವೋ ಅಥವ ಗೊತ್ತಿದ್ದುದ್ದನ್ನು ಮುಂದಿನ ಪೀಳಿಗೆಗೆ ಹೇಳಲು ಇಷ್ಟ ಇಲ್ಲವೋ ಎಂದು.ಯಾಕೋ ಏನೂ ಹೊಳೆಯುತ್ತಿಲ್ಲ ಮತ್ತೆ ಬರೆಯುವೆ.
Saturday, November 18, 2006
ಏನು ಬರೆಯಬೇಕು?
ಬ್ಲಾಗ್ ಶುರು ಅಂತು ಮಾಡಿಕೊಂಡೆ ಆದರೆ ಏನು ಬರೆಯಬೇಕೆನ್ನುವದು ಇನ್ನು ಸರಿಯಾಗಿ ಗೊತ್ತಗುತ್ತಿಲ್ಲ.ಅಂತರ್ಜಾಲದಲ್ಲಿ ನೋಡಿದರೆ ಜನ ಏನೇನೋ ಬರೆಯುವದನ್ನು ನೋಡಿದ್ದೇನೆ.ರಾಮಯಣ ಮಹಾಭಾರತಗಳ ಬಗ್ಗೆ ಬರೆಯಬೆಕೆಂದರೆ ಅಷ್ಟು ತಿಳಿದುಕೊಂಡವನಲ್ಲ.ಮೇಲಾಗಿ ಬರೆಯುವಷ್ಟು ಇನ್ನೂ ತಿಳಿದುಕೊಂಡಿಲ್ಲ.ದಿನನಿತ್ಯದ ಜೀವನದ ಬಗ್ಗೆ ಬರೆಯೋಣ ಎಂದರೆ ಬಹಳಷ್ಟು ಹೊತ್ತು,ಹೋತ್ತು ಕಳೆಯುವದರಲ್ಲೇ ಹೊತ್ತು ಕಳೇಯುತ್ತೇನೆ! ಯಾರದರೂ ಈ ಪೋಸ್ಟ್ ಓದಿದರೆ ನನ್ನನ್ನು ಬಯ್ದುಕೊಲ್ಲುತ್ತಾರೆ.ತಲೆಯಲ್ಲಿ ಏನೂ ಇಲ್ಲದೇ ಬರೆಯುವದು ಹೇಗೆ ಎಂದು ನನ್ನ ಈ ಲೇಖನ ಓದಿ ತಿಳಿದುಕೊಳ್ಳಬಹುದು.
ಸರಿ ನಾನು ಮಲಗುತ್ತೇನೆ
ಶುಭ ರಾತ್ರಿ
ಸರಿ ನಾನು ಮಲಗುತ್ತೇನೆ
ಶುಭ ರಾತ್ರಿ
Tuesday, November 14, 2006
ಕನ್ನಡ ದಲ್ಲಿ ಮೋದಲ ಬ್ಲೊಗ್
ಇವತ್ತು ಬೆಳಿಗ್ಗೆ ಎದ್ದಾಗ ಯಾಕೊ ಸ್ವಲ್ಪ ಸುಸ್ತು ಅನ್ನಿಸಿತು.ಅದಕ್ಕೆ ಆಫೀಸಿಗೆ ಹೋಗಲಿಲ್ಲಾ.ಸರಿ ಸಮಯ ಕಳೆಯಲು
ಇಂಟರ್ನೆಟ್ ಹಚ್ಚಿದೆ.ಇಂಟರ್ನೆಟ್ ನಲ್ಲಿ ಕನ್ನಡ ಬ್ಲೋಗ್ ಬರೆಯುವ ಹಾಗಿದ್ದರೆ ಚೆನ್ನಗಿತ್ತು ಅನಿಸ್ತು.
ಸರಿ ಅದರ ಬಗ್ಗೆನೆ ಒಂದು ಬ್ಲೊಗ್ ಬರೆದರೆ ಆಯ್ತು ಅನ್ಕೊಂಡೆ.ಕನ್ನಡದ ಕೊರತೆ ಎಷ್ಟು ಇದೆ ಎನ್ನುವದರ ಬಗ್ಗೆ
ಬರೆಯೋಣ ಅನ್ಕೊಂಡೆ.ಬರೆಯುವ ಮೊದಲು ಸ್ವಲ್ಪ ಸಂಶೋಧನೆ ಮಾಡುವದು ಒಳ್ಳೆಯದು ಅನ್ನಿಸ್ತು.
ಆವಾಗ ಸಿಕ್ಕಿದ್ದೆ sampada.com.ತುಂಬಾ ಚೆನ್ನಾಗಿ ವಿಷಯವನ್ನು ಹೇಳಿದ್ದಾರೆ ಅಲ್ಲಿ.
ಕನ್ನಡವನ್ನು ಬರೆಯಲಿಕ್ಕೆ ಮತ್ತು ಓದಲಿಕ್ಕಾಗಿ operating system ಗೆ ಎನೇನು ಮಾರ್ಪಾಟು
ಮಾಡಬೇಕು ಎಲ್ಲವನ್ನು ಚೆನ್ನಾಗಿ ತಿಳಿಸಿದ್ದಾರೆ.
ಕನ್ನಡ ಸಾಹಿತ್ಯದ ಬಗ್ಗೆ ನಾವು ಎಷ್ಟು ಕಾಳಜಿ ವಹಿಸಬೇಕು ಅಷ್ಟು ನಾವು ವಹಿಸುತ್ತಿಲ್ಲ ಅನ್ನುವದು ನಿಜ,ಆದರೆ
ಸಾಹಿತ್ಯವನ್ನು ಬೆಳೆಸಲು ಬೇಕಾಗುವ ಸಲಕರಣೆಯಂತು ಸಿಕ್ಕಂತಾಯಿತು.ಇನ್ನು ನಾವು ಮಾಡಬೆಕಾಗಿರುವದು
ಇಷ್ಟೆ,ಎನಾದರೂ ಬರೆಯಲಿ ಕನ್ನಡದಲ್ಲಿ ಬರೆಯೋಣ.ಅಂತರ್ಜಾಲದಲ್ಲಿ ಕನ್ನಡ ಸಾಹಿತ್ಯ ಹೆಚ್ಚಾಗಿ ದೊರೆಯುವಂತಾಗಬೇಕು.
ಒಂದೇ ಒಂದು ತೊಂದರೆ ಎನು ಅಂದರೆ ನಾವು ಬರೆಯುವ ವಿಷಯ ಚೆನ್ನಾಗಿ ಇದ್ದರೂ ಅದರಿಂದ ಹಣ ಸಂಪಾದಿಸುವದು
ಅಷ್ಟು ಸುಲಭ ಇಲ್ಲ.ಆಂಗ್ಲ ಸಾಹಿತ್ಯದಿಂದ ಹಣ ಸಂಪಾದಿಸುವದು ಸುಲಭ.google AdSense
ಒಂದು ಒಳ್ಲೆಯ ಕಾರ್ಯಕ್ರಮ.ನಾವು ಬರೆಯುವ ವಿಷಯಕ್ಕೆ ಸಂಬಂಧಿಸಿದ ಜಾಹಿರಾತುಗಳನ್ನು ಅವರು ನಮ್ಮ
ಲೇಖನದ ಪಕ್ಕಕ್ಕೆ ಪ್ರಕಟಿಸುತ್ತಾರೆ.ಕನ್ನಡದಲ್ಲಿ ಬರೆದಾಗ ನಾವು ಬರೆದ ವಿಷಯ ಗೂಗ್ಲ್ ಗೆ ತಿಳಿಯದೇ ಇರಬಹುದು.
ಆವಾಗ ಅವರು ಪ್ರಕಟಿಸುವ ಜಾಹಿರಾತು ನಾವು ಬರೆದ ವಿಷಯಕ್ಕೆ ಹೊಂದದೇ ಇರಬಹುದು.ಅದಕ್ಕೆ ಬೆರೆ ದಾರಿ ಹುಡುಕಿದರಾಯ್ತು.
ಮೋದಲ ಕೆಲಸ,ಅಂತರ್ಜಾಲವನ್ನು ಕನ್ನಡ ಸಾಹಿತ್ಯದಿಂದ ತುಂಬುವದು.
ಬನ್ನಿ ಈ ರಾಜ್ಯೋತ್ಸವದ ತಿಂಗಳು ಈ ಸಂಕಲ್ಪವನ್ನು ಮಾಡೋಣ.ಕರ್ನಾಟಕದ ಹಿರಿಮೆಯನ್ನು ತಿಳಿಯೊಣ ಹಾಗೂ
ತಿಳಿಸೋಣ.
ಸಿರಿಗನ್ನಡಂ ಗೆಲ್ಗೆ,ಸಿರಿಗನ್ನಡಂ ಬಾಳ್ಗೆ
ಜೈ ಕನ್ನಡಾಂಬೆ,ಜೈ ಕರ್ನಾಟಕ

Subscribe to:
Comments (Atom)