Tuesday, October 19, 2010

Lifeu ishtene!

ಹಂಗು ಹಿಂಗು engineering ಮುಗಸಿ ....
ಕಷ್ಟ ಪಟ್ಟು ಕೆಲಸ ಹಿಡದು ....
ಮೋಟೊರ್ ಬೈಕ್ ನಡಸಿ ಸೊಂಟ ಮುರ್ಕೊಂಡ್ ....
volvo ಬಸ್ಸಲಿ ಗಡ ಗಡ ನಡುಗೋ ಲೈಫು ಇಷ್ಟೇನೆ ...

ಹಿಂದಿನ ರಿಲೀಸ್ ನ ಬಗ್ ಲೀಕ್ಸ್ ಚೆಕ್ ಮಾಡು ...
ಮುಂದಿನ ರಿಲೀಸ್ ಗೆ ಟೆಸ್ಟ್ ಕೇಸ್ ಹಾಕು ...
ಇಂದಿನ ರಿಲೀಸ್ ಹಾಳಾಗ್ ಹೋಗ್ಲಿ ...
ಲೈಫು ಇಷ್ಟೇನೆ ..

Saturday, May 1, 2010

ರಬ್ ನೆ ಬನಾದಿ ಜೋಡಿ....

ರಬ ನೆ ಬನಾದಿ ಜೋಡಿ ನೋಡಿದೆ. ಒಳ್ಳೆ ಸಿನೆಮ ಇದನ್ನ ಟಾಕಿಸ್ ನಲ್ಲಿ ಯಾಕಾದರೂ ನೋಡಲಿಲ್ಲ ಅನಿಸ್ತು. ಚಿತ್ರವನ್ನ ಅದರ hype period ನ ನಂತರ ನೋಡೋ ಮಜಾನೆ ಬೇರೆ. ಅಲ್ಲಿ ಯಾರದೂ review ನ ದೃಷ್ಟಿ ಇರೋದಿಲ್ಲ ಬರಿ ಮನೋರಂಜನೆಯೇ ಉದ್ದೇಶ ಆಗಿರ್ತದೆ. ಇರಲಿ ಕಥೆ ಇಷ್ಟೇ... ಮಾಸ್ತರ್ ಮಗಳ ಮದುವೆಗೆ ಹೋಗಿ ಅನಿವಾರ್ಯ ಕಾರಣದಿಂದ ಅವಳನ್ನೇ ಮದುವೆ ಮಾಡಿಕೊಂಡು ಅವಳೊಂದಿಗೆ ಸಂಸಾರ ಮಾಡೋ ಸಾಮಾನ್ಯ ಮನುಷ್ಯನ ಕಥೆ. ಚೆನ್ನಾಗಿ ಬರೆದಿದ್ದರೆ ಚಿತ್ರಕಥೆಯನ್ನ. ಚಿತ್ರಕಥೆ ಚೆನ್ನಾಗಿದ್ದರೆ ಸಣ್ಣ ಪುಟ್ಟ ನಿರ್ದೇಶನದ ತಪ್ಪುಗಳನ್ನ ಹೊಂದಿಸಿಕೊಂಡು ಹೋಗಬಹುದು.
ಶಾಹರುಖ್ ಖಾನ್ ನನ್ನ ಅತ್ಯಂತ ಮೆಚ್ಚಿನ ನಟನೆನು ಅಲ್ಲ, ಆದ್ರೆ ಆತ ಸಾಮಾನ್ಯ ಮನುಷ್ಯನಾಗಿ ಅಭಿನಯಿಸಿದ ಎಲ್ಲ ಚಿತ್ರಗಳು ನನಗೆ ಹಿಡಿಸಿವೆ. ಅದು ದಿಲ್ ಸೆ, ಕಭಿ ಹಾ ಕಭಿ ನಾ ಅಥವಾ ರಾಜು ಬನ್ ಗಯಾ ಜಂಟಲ್ ಮ್ಯಾನ್ ಆಗಿರಬಹುದು. ಪೂರ್ತಿ ರಿವಿವ್ ಬರೆಯೋ ಉದ್ದೇಶ ಏನು ಇಲ್ಲ. ಆದರು ಒಂದು ವಿಷಯ ಹೇಳ್ಬೇಕು. ಕಥೆ ಹೇಳ್ತಾ ಹೇಳ್ತಾ ಒಬ್ಬ ಆದರ್ಶ ಗಂಡನಿಂದ ಒಬ್ಬ ಅನುಮಾನಿ ಗಂಡನಾಗಿ ಸ್ವಲ್ಪ ತೋರಿಸಿದ್ದಾನೆ ನಿರ್ದೇಶಕ. ಹೆಂಡತಿ ತನ್ನ ಇನ್ನೊಂದು ವೇಷದೊಂದಿಗೆ ಓಡಿ ಹೋಗುತ್ತಾಳೋ ಏನೋ ನೋಡೋಣ ಅಂತ ಮಾಡೋ ಪ್ರಯತ್ನ faminists ಗೆ ಸ್ವಲ್ಪ ಸಿಟ್ಟು ತರಿಸಬಹುದು. ನಾನು ಹೇಗಿದ್ದಿನೋ ಹಾಗೆ ಒಪ್ಪಿಕೊಳ್ಳಲಿ ಅವಳು ಅಂತ ಅನ್ನುವ ಮಾತು ಸ್ವಲ್ಪ ಸಾಮಾನ್ಯ ಭಾರತೀಯ ಗಂಡಸಿನಂತಿದೆ. ಆದ್ರೆ ಅವಳು ಬದಲಾಗೋದು ಅವನಿಗೆ ಇಷ್ಟ ಇರೋದಿಲ್ಲ! ಇದನ್ನ ಚೆನ್ನಾಗಿ manage ಮಾಡಿದ್ದರೆ ನಿರ್ದೇಶಕರು. ಭಾರತ ಪುರುಷ ಪ್ರಧಾನ ದೇಶ ಆಗಿತ್ತು, ಹಾಗಂತ ಈಗ ಹೇಳೋಕಾಗಲ್ಲ.. ಹಾಗಂತ ಮಹಿಳೆಯರನ್ನ ಮೆಚ್ಚಿಸಲಿಕ್ಕೆ ಹೋದ್ರೆ ಸಿನೆಮ ಸೋಲೋ ಸಾಧ್ಯತೆ ಇರ್ತದೆ. ಎರಡನ್ನು ಚೆನ್ನಾಗಿ ಹೊಂದಿಸಿಕೊಂಡು ಹೋಗಿದ್ದಾರೆ ನಿರ್ದೇಶಕರು. ಒಟ್ಟಿನಲ್ಲಿ ಒಂದು ಒಳ್ಳೆ ಚಿತ್ರ ನೀಡಿದ್ದಾರೆ ದರ್ಶಕಾರಿಗೆ.

Sunday, April 25, 2010

ಭಾನುವಾರದ ಮಳೆ






ಭಾನುವಾರ ಮಧ್ಯಾಣ ಹೊತ್ತು ಕಳೆಯೋದು ಕಷ್ಟ ಅನಸ್ಲಿಕತಿತ್ತು. "ಮಳೆ ಬರಲಿ ಮಂಜೂ ಇರಲಿ" ಆಯ್ತು "ಚಶ್ಮೆ ಬದ್ದೂರ್" ಕೂಡಾ ಮುಗೀತು. ಹೀಗೆ ಎರಡು ಸಿನೆಮ ನೋಡಿದ್ರೂ ಟೈಂ ಹೋಗ್ತಾ ಇಲ್ಲ. ಏನು ಮಾಡಬೇಕೋ ತೋಚದೆ ಸುಮ್ನೆ ಕೂತಾಗ ಶುರು ಆಯ್ತು ಜೋರಾದ ಗಾಳಿ. ಎಂದೂ ಹತ್ತದ ಮಾಳಿಗೆ ಹತ್ತಿ ಗಾಳಿಯ ಮಜ ತೊಗೊಳ್ತಾ ಇದ್ದಾಗ ತೆಗೆದ ಚಿತ್ರಗಳು. ಕ್ಯಾಮೆರಾ ಇರಲಿಲ್ಲ ಮೊನ್ನೆ ತಾನೇ ತೊಗೊಂಡ ಇ೬೩ ಇಂದ ತೆಗೆದೇ ಚಿತ್ರಗಳನ್ನ. ಮೋಡದ ಒಳಗಿಂದ ಬರ್ತಿದ್ದ ಸೂರ್ಯ ಕಿರಣಗಳು ನೋಡ್ಲಿಕ್ಕೆ ಬಲು ಚೆಂದ.





javascript:void(0)

ಮಳೆ ನೋಡುತ್ತಾ ಹೀರಿದ ಕಾಫಿ ಲೋಟ ತೊಳೆದದ್ದು ಹೀಗೆ. :-)

Saturday, April 10, 2010

Bangalore ಸೆಕೆ

ಗುಲ್ಬರ್ಗ ದಿಂದ ಬಂದ ನಮಗೆ ಸೆಕೆ ಏನು ಹೊಸದಲ್ಲ. ಆದ್ರೆ ಈ ಸಲದ ಬೇಸಿಗೆ ನಮಗೆ ಮತ್ತೆ ಗುಲ್ಬರ್ಗಾ ದ ನೆನಪು ತರಿಸುತ್ತಿದೆ. ನಾವು ಬೆಂಗಳೂರಿಗೆ ಬಂದಾಗ ಹೀಗಿರಲಿಲ್ಲ. ಚಳಿಗಾಲದಲ್ಲಿ ಚಳಿ ಮಳೆಗಾಲದಲ್ಲಿ ಮಳಿ ಬರ್ತಾ ಇತ್ತು. ಈ ವರ್ಷದ ಹವಾಮಾನ ಏರುಪೇರು ನೋಡಿದ್ರೆ ನಿಜಕ್ಕೂ ಚಿಂತೆ ಆಗ್ತದೆ.